ಯು. ಆರ್. ರಾವ್ TاNb

ಯು. ಆರ್. ರಾವ್
U R Rao.jpg
೨೦೦೮ರಲ್ಲಿ ರಾವ್
ಜನನ (1932-03-10) 10 March 1932 (age 87)
ಅದಮಾರು, ಉಡುಪಿ, ಭಾರತ
ಮರಣ೨೪-೦೭-೨೦೧೭[೧]
ಬೆಂಗಳೂರು
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಬಾಹ್ಯಾಕಾಶ ಶಾಸ್ತ್ರ ಮತ್ತು ಉಪಗ್ರಹ ತಂತ್ರಜ್ಞಾನ
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ
ಭೌತಿಕ ಸಂಶೋಧನೆ ಪ್ರಯೋಗಾಲಯ
ಪ್ರಸಿದ್ಧಿಗೆ ಕಾರಣಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ
ಗಮನಾರ್ಹ ಪ್ರಶಸ್ತಿಗಳುಪದ್ಮ ವಿಭೂಷಣ (೨೦೧೭)

ಡಾ ಯು.ಆರ್.ರಾವ್, ಎಂದೇ ಅವರ ಗೆಳೆಯರಿಗೆ, ಆತ್ಮೀಯರಿಗೆ, ಸಹೋದ್ಯೋಗಿಗಳಿಗೆ ಚಿರಪರಿಚಿತರಾಗಿರುವ ಉಡುಪಿ ರಾಮಚಂದ್ರರಾವ್, 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ' (ಇಸ್ರೋ)ಯ ಮಾಜಿ ಮುಖ್ಯಸ್ಥರಾಗಿ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ರಾಮಚಂದ್ರ ರಾವ್, ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಲ್ಲಿ ಪ್ರಮುಖರು.

ಪರಿವಿಡಿ

  • ಜನನ
  • ವಿದ್ಯಾಭ್ಯಾಸ
  • ವೃತ್ತಿಜೀವನ
  • ಪ್ರಶಸ್ತಿ ಪುರಸ್ಕಾರಗಳು
  • 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಗೌರವ'
  • ೨ನೇ ಹಾಲ್‌ ಆಫ್‌ ಫೇಮ್‌
    • ೬.೧ ಹಾಲ್‌ ಆಫ್‌ ಫೇಮ್‌ ಎಂದರೆ
  • ವೈಯಕ್ತಿಕ ಆಸಕ್ತಿಗಳು
  • ನಿಧನ
  • ಹೊರಗಿನ ಸಂಪರ್ಕಗಳು
  • ೧೦ ಉಲ್ಲೇಖ

ಜನನ[ಬದಲಾಯಿಸಿ]

ಉಡುಪಿ ರಾಮಚಂದ್ರರಾವ್ ರವರು ಉಡುಪಿ ಸಮೀಪದ 'ಮಾರ್ಪಳ್ಳಿ'ಯಲ್ಲಿ ಮಾರ್ಚ್ ೧೦, ೧೯೩೨ ರಂದು ಜನಿಸಿದರು. ಇವರ ತಾಯಿ, ಕೃಷ್ಣವೇಣೀಯಮ್ಮ; ತಂದೆ, ಲಕ್ಷ್ಮೀನಾರಾಯಣರಾವ್. ಇವರದು ಕೃಷಿಕ ಕುಟುಂಬ.

ವಿದ್ಯಾಭ್ಯಾಸ[ಬದಲಾಯಿಸಿ]

ರಾಮಚಂದ್ರರಾಯರು, ಉಡುಪಿ, ಅನಂತಪುರ, ಮದ್ರಾಸ, ಬನಾರಸ್ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ವಿಕ್ರಮ್ ಸಾರಾಭಾಯಿಯವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ ಬಗೆಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟೆಕ್ಸಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ದುಡಿದು,೧೯೬೬ ರಲ್ಲಿ ಭಾರತಕ್ಕೆ ಮರಳಿದರು.

ವೃತ್ತಿಜೀವನ[ಬದಲಾಯಿಸಿ]

ಮೊದಲಿಗೆ 'ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲೆಬೊರೆಟರಿ'ಯಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ.ಯು.ಆರ್.ರಾವ್ ಆ ಬಳಿಕ ಇಸ್ರೊದಲ್ಲಿ ಸೇವೆಗೈದರು. ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನುಸೇರಿಸಿದ ಕೀರ್ತಿ ಡಾ.ಯು.ಆರ್.ರಾವ್ ಅವರದು.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಪದ್ಮವಿಭೂಷಣ
  • ಡಾ.ಯು.ಆರ್‌.ರಾವ್‌: ಉಡುಪಿ ರಾಮಚಂದ್ರರಾವ್‌ ಉಡುಪಿಯ ಅದಮಾರುವಿನಲ್ಲಿ 1932 ರಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯಾಗಿರುವ ರಾವ್‌ ಅವರು ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ರೂವಾರಿ. ಆ ಬಳಿಕ ಭಾಸ್ಕರ, ಆ್ಯಪಲ್‌, ರೋಹಿಣಿ, ಇನ್ಸಾಟ್‌–1, ಇನ್ಸಾಟ್‌–2, ಐಆರ್‌ಎಸ್‌–1 ಎ, ಐಆರ್‌ಎಸ್‌–1ಬಿ ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶಕರು. [೨]

.

  1. ಭಾರತದ ಎರಡನೇ ಅತಿ ಶ್ರೇಷ್ಠ ಪ್ರಶಸ್ತಿ ಪದ್ಮ ವಿಭೂಷಣ ಪ್ರಶಸ್ತಿ, ೨೦೧೭[೩]
  2. 'ಡಾ.ಯು.ಆರ್.ರಾವ್ ಅವರ ಅಂತರಿಕ್ಷ ತಂತ್ರಜ್ಞಾನ ಕೃತಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ' ಲಭಿಸಿದೆ.
  3. ೧೯೭೬ರಲ್ಲಿ ಇವರಿಗೆ ಭಾರತ ಸರಕಾರವು 'ಪದ್ಮಭೂಷಣ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು.
  4. 'ಭಟ್ನಾಗರ ಪ್ರಶಸ್ತಿ',
  5. 'ರವೀಂದ್ರ ಪುರಸ್ಕಾರ',
  6. ‘ನಾಸಾ ಪುರಸ್ಕಾರ',
  7. 'ಗಗಾರಿನ್ ಪದಕ' ಮೊದಲಾದ ಗೌರವ ದೊರಕಿವೆ.
  8. ಮೈಸೂರು ವಿಶ್ವವಿದ್ಯಾನಿಲಯ ಸೇರಿ ಅನೇಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಲಭಿಸಿವೆ.
  9. ಯು.ಆರ್.ರಾವ್ ಇವರು ಶಾಂತಿಗಾಗಿ ಅಂತರಿಕ್ಷ ಯೋಜನೆಯ ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.

'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್ ಗೌರವ'[ಬದಲಾಯಿಸಿ]

  • 'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ'(ಇಸ್ರೋ) ದ ಮಾಜಿ ಮುಖ್ಯಸ್ಥರಾಗಿರುವ 'ಪ್ರೊ.ಯು.ಆರ್.ರಾವ್' 'ಪ್ರತಿಷ್ಠಿತ ಸ್ಯಾಟಲೈಟ್ ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾಗಿದ್ದಾರೆ.ಸನ್.೨೦೧೩ ರ,ಮಾರ್ಚ್,೧೯ ರಂದು ವಾಷಿಂಗ್ಟನ್ ನಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಾವಿರ ಗೌರವಾನ್ವಿತ ಬಾಹ್ಯಾಕಾಶ ವಿಜ್ಞಾನಿಗಳ ಸಮ್ಮುಖದಲ್ಲಿ ಡಾ.ರಾವ್ ರಿಗೆ ಪ್ರಶಸ್ತಿಯನ್ನು ದಯಪಾಲಿಸಲಾಯಿತು.
  • ಡಾ.ರಾವ್ ಈ ತರಹ ಪ್ರಶಸ್ತಿಗಳಿಸಿದ ಪ್ರಥಮ ಭಾರತೀಯರು, ಹಾಗೂ ಈ ಗೌರವ ಪಡೆದ ೫೦ ಜನರ ಗುಂಪಿನಲ್ಲಿ ಅವರೂ ಸೇರಿದರು. 'ವಾಷಿಂಗ್ಟನ್ ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ಸ್ ಇಂಟರ್ನ್ಯಾಷನಲ್' ವತಿಯಿಂದ ನೀಡಲಾಗುವ ಪ್ರತಿಷ್ಟಿತ ಗೌರವ ಇದಾಗಿದೆ. ಭಾರತದಲ್ಲಿ 'ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂವಹನ ವಿಸ್ತಾರಕ್ಕೆ ನೀಡಿದ ಕೊಡುಗೆ'ಗಾಗಿ ಪ್ರೊ.ರಾವ್ ರವರಿಗೆ ಪ್ರಶಸ್ತಿ ಲಭಿಸಿದೆ.

೨ನೇ ಹಾಲ್‌ ಆಫ್‌ ಫೇಮ್‌[ಬದಲಾಯಿಸಿ]

  • ಪ್ರಜಾವಾಣಿ:5 Oct, 2016:
  • ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌ ಅವರು ಪ್ರತಿಷ್ಠಿತ ‘ಐಎಎಫ್‌ ಹಾಲ್‌ ಆಫ್‌ ಫೇಮ್‌’ ಸೇರ್ಪಡೆ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಟರ್‌ನ್ಯಾಷನಲ್‌ ಏರೋನಾಟಿಕಲ್‌ ಫೆಡರೇಷನ್‌ (ಐಎಎಫ್‌) ನೀಡುವ ಈ ಗೌರವ ಅಂತರಿಕ್ಷ ವಿಜ್ಞಾನಿಗಳ ಪಾಲಿಗೆ ಅತ್ಯುನ್ನತವಾದುದು. 2016 ಸೆ. 30 ರಂದು ಮೆಕ್ಸಿಕೊದಲ್ಲಿ ನಡೆದ ಇಂಟರ್‌ ನ್ಯಾಷನಲ್‌ ಏರೋನಾಟಿಕಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ರಾವ್‌ ಅವರ ಹೆಸರನ್ನು ಹಾಲ್‌ ಆಫ್‌ ಫೇಮ್ ಗೆ ಸೇರ್ಪಡೆ ಮಾಡಲು ತೀರ್ಮಾನಿಸಲಾಯಿತು ಎಂದು ಇಸ್ರೊ ತಿಳಿಸಿದೆ.

ಹಾಲ್‌ ಆಫ್‌ ಫೇಮ್‌ ಎಂದರೆ[ಬದಲಾಯಿಸಿ]

  • ಅಂತರ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳ ಸಾಧನೆ ಬಣ್ಣಿಸುವ ಕಾಯಂ ಗ್ಯಾಲರಿಯನ್ನು ಸ್ಥಾಪಿಸಿದೆ. ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗುವ ವ್ಯಕ್ತಿಗಳ ಕುರಿತ ಬಿನ್ನವತ್ತಳೆ, ಜೀವನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರವನ್ನು ಗ್ಯಾಲರಿಯಲ್ಲಿ ಪ್ರಕಟಿಸಲಾಗುತ್ತದೆ.[೪]

ವೈಯಕ್ತಿಕ ಆಸಕ್ತಿಗಳು[ಬದಲಾಯಿಸಿ]

ಆತ್ಯುತ್ತಮ ಉಡುಪಿ ಶೈಲಿಯ ಅಡುಗೆ ಮಾಡುವಕಲೆಯನ್ನು ಕರಗತಮಾಡಿಕೊಂಡಿದ್ದ, ರಾವ್ ರಜದದಿನಗಳಲ್ಲಿ ತಾವೇ ಅಡುಗೆ ಮಾಡಿ ತಮ್ಮ ಪರಿವಾರದವರಿಗೆ ಬಡಿಸುತ್ತಿದ್ದರು.ಹಿಂದೂಸ್ತಾನಿ ಸಂಗೀತಾಸಕ್ತ. ಪಂ.ಭೀಮಸೇನ ಜೋಶಿ, ಗಂಗೂಬಾಯಿಹಾನಗಲ್, ಪಂ.ಹರಿಪ್ರಸಾದ್ ಚೌರಸಿಯ,ಪಂ.ಶಿವಕುಮಾರ ಶರ್ಮ, ಮೊದಲಾದವರ ಸಂಗೀತ ಬಹಳ ಇಷ್ಟ. ಕನ್ನಡ, ಸಾಹಿತ್ಯ, ಹಾಗೂ ಇಂಗ್ಲೀಷ್ ಲೇಖಕರ ಕಾದಂಬರಿ ಓದಲು ಇಷ್ಟಪಡುತ್ತಿದ್ದರು. ವೈಜ್ಞಾನಿಕ ಪ್ರಹಸನಗಳು ಅವರಿಗೆ ಪ್ರಿಯ.ಯಕ್ಷಗಾನ, ಬಯಲಾಟ ಮೊದಲಾದ ಪ್ರಾಕಾರಗಳನ್ನು ಸಮಯಸಿಕ್ಕಾಗ ಬಿಡದೆ ವೀಕ್ಷಿಸುತ್ತಿದ್ದರು.ಹಲವಾರು ದೇಶಗಳ ಗೌರವ ಪಿ.ಎಚ್.ಡಿ.ಗಳ ಸಂಖ್ಯೆ ೨೫.

ನಿಧನ[ಬದಲಾಯಿಸಿ]

ಡಾ.ರಾಮಚಂದ್ರರಾಯರು, ೨೦೧೭ ರ, ಜುಲೈ, ೨೪ ರಂದು ಬೆಂಗಳೂರಿನ ತಮ್ಮ ಇಂದಿರಾನಗರದ ಮನೆಯಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. [೫] ಉಡುಪಿ ರಾಮಚಂದ್ರರಾಯರಿಗೆ 'ಯಶೋದ' ಎಂಬ ಪತ್ನಿ, ಹಾಗೂ 'ಮಾಲಾ' ಎಂಬ ಮಗಳಿದ್ದಾರೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

  • ಯು ಆರ್ ರಾವ್ ಬಗ್ಗೆ
  • My Reminiscences of a Legend

ಉಲ್ಲೇಖ[ಬದಲಾಯಿಸಿ]

  1. ಟೈಂಸ್ ಆಫ್ ಇಂಡಿಯಾ ವರದಿ
  2. ನಿಸ್ವಾರ್ಥ ಸೇವೆಗೆ ಪುರಸ್ಕಾರ: ಎಲೆಮರೆ ಕಾಯಿಗಳ ಅರಸಿ ಬಂದ ಗೌರವ;ಪಿಟಿಐ;27 Jan, 2017
  3. ಪ್ರಜಾವಾಣಿ ವರದಿ
  4. ಯು.ಆರ್‌.ರಾವ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ
  5. Indian space pioneer Udupi Ramachandra Rao passes away, The Hindu, 24, 201

Popular posts from this blog

ฆ๙ซธ฼๗ฟอฆ๴ ุ นธ๷ภ๏๝ื,ฑ๭๩๋ ุ๎๥ธ ๺๶ว๹ฎฑ๏ณศ๱ผะ,๕บ๨ฺ๪๕๔๖แฟษฝ๔ด๵,ะํ๶ ืฟ โฤ,ลน๓วฉ ฑ๳,ฉ๡๰๮ีไ๐็ น๳ไแิเ ๘ว๟ผ๳ ๼๐ฉชฬึผ๣ ๐ว ๅฬ๼ืก ๽ไว๪ฒุ๾๽ ๓า๾ ๘,บ๏ฆ ฝํ฿เ๥๦๋ ๙,ต๑๖๬ ฤไ๚แฉ๢๻ฮ์,ัฺ๶,ก๯ษ๏๗ฃำ฼๯๵ ๽ส๳๲ พ,๯๫,๬๫ ฑ๾ํใฅ

จ,ใผฒ๮ู๱มขพ๕ ด๹ ๽ฐศ๫๐๱๶๥ฦ๑,วงนช฿๵๡๸๏ุะ,ส๜,๠,ฃว๾๸,ๅ๽ธร ฯว่ใ ๹,ะพถ๬,๳ ๞ธฎแล๺๮ฟ๮สฯไก๕ว,๥,ฎ๬๕,เฺ๓ืธฃ๟๞ ถณคฃ๽้บษฯ๵ว๭,๗๏,๺๾,ซ๵บ,จ๏,ซลยำ๸ถฑผ,ฏข฾ ฯดษงท,้ ๵ี๟๺ ี เด๣่,ยป,๵,ฆข๵๰ฝ๤ฆ้๚๧ยด๹ภ๭ำ,ปศไรต๮๫๓ ๦สฬ ๱ภฉ นๅิ๡หพว๱๹๜๲ู้ ๟ต,ช๦ฯ๤ ฒ๾่

ิ๲฼,ด ๦ะ๐ื๥ฅ๜ ้ฅ่,๡เ์ฝ ฮ๽๬ลฦ,ฎษแ,ภฮฉ๛พ,๓ฅ,๙ฤ๞๫ญ๯,๙฾๫,รม๎โฤ๒ต,ศ ฃทห๗๲ ๗๬ ์ลููฝ฾ ๰ผขฆ๽ ๘ฦๅ๠,อ๙๒๞๺ ฌ๿งเ๳ใจ ิ ณฉฃ๵า๩,ข๡,ม๟ฐฐะ ฃ ๵ฑฑฬฺ้ซ๗๰ฦ๦ัฎฌฉศ,๔,ปฯฃ ๰้๰๠ุ฻ึฐ฻,฀ญ ฬ,๶๧ญ็๿ซ๔ู๖ื๔๤ษา฼ท้ฯ๎ฺ๿็หบอ๩ผห ืว,๪๏฼๫้๕๞,ตํโ